ಆ ದೃಶ್ಯ -2019 ರ ಭಾರತೀಯ ಕನ್ನಡ ಭಾಷೆಯ ನಿಯೋ-ನಾಯರ್ ಕ್ರೈಮ್ ಥ್ರಿಲ್ಲರ್ ಆಗಿದ್ದು ಕಾರ್ತಿಕ್ ನರೇನ್ ಬರೆದಿದ್ದಾರೆ ಮತ್ತು ಶಿವ ಗಣೇಶ್ ನಿರ್ದೇಶಿಸಿದ್ದಾರೆ. ಕೆ ಮಂಜು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕೆ. ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ವಿ. ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ರಮೇಶ್ ಭಟ್ ಮತ್ತು ಚೈತ್ರಾ ಆಚಾರ್ ಇದ್ದಾರೆ. ಚಿತ್ರಕ್ಕೆ ಸಂಗೀತ ಗೌತಮ್ ಶ್ರೀವಾಸ್ತ ಅವರದ್ದು , ಛಾಯಾಗ್ರಹಣ ಎ. ವಿನೋದ್ ಭಾರತಿ ಅವರದ್ದು . ಚಿತ್ರದ ಸಂಕಲನವನ್ನು ಸುರೇಶ್ ಅರುಮುಗಂ ಮಾಡಿದ್ದಾರೆ. ಈ ಚಿತ್ರವು 2016 ರ ತಮಿಳಿನ ಧುರುವಂಗಲ್ ಪಥಿನಾರು ಚಿತ್ರದ ರೀಮೇಕ್ ಆಗಿದ್ದು, ಅದರಲ್ಲಿ ರೆಹಮಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. == ಪಾತ್ರವರ್ಗ == ವಿ. ರವಿಚಂದ್ರನ್ ಇನ್ಸ್‌ಪೆಕ್ಟರ್ ಸೂರ್ಯ ತೇಜ್ ಆಗಿ ರಮೇಶ್ ಭಟ್ ರಾಜಣ್ಣ ಪಾತ್ರದಲ್ಲಿ ಅಚ್ಯುತ್ ಕುಮಾರ್ ಯಶ್ ಶೆಟ್ಟಿ ಚೇತನ್ ವಿಕ್ಕಿ ಅರ್ಜುನ್ ಗೌಡ ನಿಸರ್ಗ ಚೈತ್ರಾ ಆಚಾರ್ ಸಮರ್ಥನಾಗಿ ಗಿರೀಶ್ == ಬಿಡುಗಡೆ == ಚಲನಚಿತ್ರವನ್ನು ಮೊದಲು 18 ನವೆಂಬರ್ 2019 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಹಿಂದಿನ ದಿನಾಂಕವನ್ನು ನವೆಂಬರ್ 8 ಕ್ಕೆ ಸ್ಥಳಾಂತರಿಸಲಾಯಿತು. == ಹಿನ್ನೆಲೆ ಸಂಗೀತ == ಚಿತ್ರದ ಹಿನ್ನೆಲೆ ಸಂಗೀತವನ್ನು ಗೌತಮ್ ಶ್ರೀವಸತಾ ಅವರು ಸಂಯೋಜಿಸಿದ್ದಾರೆ ಮತ್ತು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಗೀತದ ಹಕ್ಕುಗಳನ್ನು ಡಿ-ಬೀಟ್ಸ್ ಪಡೆದುಕೊಂಡಿದೆ == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 3.5/5 ರೇಟಿಂಗ್ ಅನ್ನು ನೀಡಿತು ಮತ್ತು "ಈ ಚಿತ್ರವು ಮೂಲವನ್ನು ನೋಡದವರನ್ನು ಮನರಂಜಿಸುತ್ತದೆ ಅಷ್ಟೇ ಅಲ್ಲದೆ ಧ್ರುವಂಗಲ್ ಪತ್ತಿನಾರು ನೋಡಿದವರಿಗೆ ಕೂಡ ಇದು ನೋಡಲು ಯೋಗ್ಯವಾದ ಚಿತ್ರವಾಗಿದೆ. ಇಲ್ಲಿ ಚಿತ್ರದ ನಿರ್ಮಾಪಕರು ಯಶಸ್ವಿಯಾಗಿದ್ದಾರೆ. ಇತರ ಇಂಡಸ್ಟ್ರಿಗಳಿಂದ ಉತ್ತಮ ಚಲನಚಿತ್ರಗಳ ರೀಮೇಕ್‌ಗಳನ್ನು ಈ ರೀತಿ ಒದಗಿಸಿದರೆ, ಪ್ರೇಕ್ಷಕರು ಆತ್ಮವಿಶ್ವಾಸದಿಂದ ಹೆಚ್ಚಿನದನ್ನು ಬಯಸಬಹುದು." ಬೆಂಗಳೂರು ಮಿರರ್ 3.5/5 ರೇಟಿಂಗ್ ನೀಡಿ "ರವಿಚಂದ್ರನ್ ಅವರ ಪಾತ್ರಗಳು ಒಟ್ಟಾರೆ ಕಥೆಯಲ್ಲಿ ನಿರೂಪಣೆಯನ್ನು ತುಂಬುತ್ತದೆ" ಎಂದು ಬರೆದಿದೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ 3/5 ರೇಟಿಂಗ್ ನೀಡಿತು ಮತ್ತು "ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಗಮನದಲ್ಲಿಟ್ಟುಕೊಂಡು ರಹಸ್ಯಮಯ ಚಿತ್ರವನ್ನು ನೋಡಲು ಬಯಸುವ ಎಲ್ಲರಿಗೂ ಈ ಚಿತ್ರವು ರೋಮಾಂಚಕ ಆಗಬಹುದು" ಎಂದು ಬರೆದಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಆ ದೃಶ್ಯ @ ಐ ಎಮ್ ಡಿ ಬಿ